ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರತಂಡ ಇಂದು ಸಂಜೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಲಿದೆ. ಟೀಸರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ಈಗ ಮುಂದಿನ ಅಪ್‌ಡೇಟ್ ನೀಡುತ್ತಿದೆ. ಈ ಕುರಿತು ಉಮಾಪತಿ ಫಿಲಂಸ್ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಟ್ವೀಟ್ ಮಾಡಿದ್ದು, ಫೆಬ್ರವರಿ 9 ರಂದು ಸಂಜೆ 5.05 ಗಂಟೆಗೆ ಏನು ಆ ಸರ್ಪ್ರೈಸ್ ಎಂದು ಘೋಷಣೆ ಮಾಡಲಿದ್ದಾರೆ. ಸದ್ಯಕ್ಕೆ ಅಪ್‌ಡೇಟ್ ಏನು ಎನ್ನುವುದು ತಿಳಿದಿಲ್ಲ. ಆದರೆ, ಟ್ರೈಲರ್ ಅಥವಾ ಮೊದಲ ಹಾಡು ರಿಲೀಸ್ ಮಾಡಬಹುದಾ ಎಂದು ನಿರೀಕ್ಷಿಸಲಾಗುತ್ತಿದೆ.<br /><br />Roberrt, Madagaja movie Producer Umapathy srinivas gowda to announce his next movie today february 9th, 2021.